ಮಕ್ಕಳ ಮನಸ್ಸಿನ ವಿಕಾಸ ಮುಖ್ಯ : ರಂಗನಾಥ್
ತಿಪಟೂರು ಮೇ-16 : ಬೇಸಿಗೆ ಶಿಬಿರಗಳು ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸಿ ಮನಸ್ಸನ್ನು ವಿಕಾಸಗೊಳಿಸುತ್ತವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್ ತಿಳಿಸಿದರು.ತಾಲ್ಲೂಕಿನ ಕೊನೇಹಳ್ಳಿ ಮೂಡಲಪಾಯ ಯಕ್ಷಗಾನ ಕೇಂದ್ರದ ಆವರಣದಲ್ಲಿ ಶಿಶು ಅಭಿವೃದ್ಧಿ ಇಲಾಖೆ, ಭೂಮಿ ರಂಗ ಪ್ರಯೋಗ ಶಾಲೆ, ಮೂಡಲಪಾಯ ಯಕ್ಷಗಾನ ಕೇಂದ್ರ ಹಾಗೂ ಮತ್ತೀಹಳ್ಳಿ ಗ್ರಾಮ ಪಂಚಾಯಿತಿಯಿಂದ ಬುಧವಾರ ಆರಂಭವಾದ ೧೦ ದಿನಗಳ ಚಿಣ್ಣರ ವಸಂತೋತ್ಸವ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಈ ಬೇಸಿಗೆ ಶಿಬಿರ ವಿಶಿಷ್ಟವಾಗಿದೆ. ನಗರವಾಸಿಗಳಿಗಿಂತ ಗ್ರಾಮೀಣ ಮಕ್ಕಳಲ್ಲಿಯೇ ಹೆಚ್ಚು ಗ್ರಹಿಕೆ ಮತ್ತು ಸೃಜನಶೀಲತೆ ಇರುತ್ತದೆ. ಇದನ್ನು ಪ್ರೇರೇಪಿಸುವ ಕೆಲಸಗಳಾಗಬೇಕು ಎಂದರು. ಭೂಮಿ ರಂಗ ಪ್ರಯೋಗ ಶಾಲೆಯ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಮೂಡಲಪಾಯ ಯಕ್ಷಗಾನದ ಜೊತೆ ಈ ಭಾಗದ ಸಾಂಸ್ಕೃತಿಕ ಶ್ರೀಮಂತಿಕೆ ಬೆಸೆದುಕೊಂಡಿದೆ. ಈ ನೆಲೆಯ ಮೂಲಕ ಮಕ್ಕಳ ಕಲಾಭಿರುಚಿಯನ್ನು ವಿಸ್ತರಿಸುವ ಪ್ರಯತ್ನ ಸಾಗಿದೆ
ದುಡಿಯುವ ವರ್ಗಗಳ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದೆ : ಎನ್.ಕೆ. ಸುಬ್ರಹ್ಮಣ್ಯ
ತಿಪಟೂರು ಮೇ-೧೫ : ರಾಜಕೀಯ ಬೆಂಬಲಿತ ಕಾರ್ಪೋರೇಟ್ ವ್ಯವಸ್ಥೆಯಲ್ಲಿ ದುಡಿಯುವ ವರ್ಗಗಳ ಮೇಲೆ ಶೋಷಣೆ ಮತ್ತು ದಬ್ಬಾಳಿಕೆ ಹೆಚ್ಚುತ್ತಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಕಳವಳ ವ್ಯಕ್ತಪಡಿಸಿದರು.ನಗರದ ರೈತ ಭವನದಲ್ಲಿ ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ನಡೆದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ, ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಅವರ ಬದುಕಿನ ಭದ್ರತೆ ಕಾಪಾಡುವ ತುರ್ತು ಹಿಂದಿಗಿಂತ ಹೆಚ್ಚಿದೆ. ಹಕ್ಕುಗಳ ಮೇಲಿನ ದಾಳಿಯ ವಿರುದ್ಧ ಸೌಹಾರ್ದ ಕಾರ್ಯಾಚರಣೆ ನಡೆಸಬೇಕು. ಕಾರ್ಮಿಕರ ಸಂಘಟನೆ ಶಕ್ತಿಯನ್ನು ಬಲಪಡಿಸಬೇಕು ಎಂದು ತಿಳಿಸಿದರು.ಕಟ್ಟಡ ಮತ್ತು ಇತರೆ ನಿರ್ಮಾಣಕಾರರ ಫೆಡರೇಷನ್ ಜಿಲ್ಲಾ ಅಧ್ಯಕ್ಷ ಬಿ. ಉಮೇಶ್ ಮಾತನಾಡಿ, ಪಟ್ಟಭದ್ರ ಬಂಡವಾಳಶಾಹಿ ವ್ಯವಸ್ಥೆಯೇ ವಿಶ್ವದ ಆರ್ಥಿಕ ಭಿಕ್ಕಟ್ಟಿಗೆ ಕಾರಣವಾಗಿದೆ. ಕಾರ್ಮಿಕರ ಆಕ್ರೋಶ ಮಾತ್ರ ಅಂಥ ಕುಯುಕ್ತಿಗಳನ್ನು ಬಗ್ಗು ಬಡಿಯಬಲ್ಲದು ಎಂದರು.ಸಿಐಟಿಯು ತಾಲ್ಲೂಕು ಅಧ್ಯಕ್ಷೆ ಬಿ.ಎಸ್. ಅನುಸೂಯಮ್ಮ ಮಾತನಾಡಿ, ರೈತರು,
ಕರ್ತವ್ಯನಿರತ ಲೈನ್‌ಮೆನ್ ಸಾವು
ತಿಪಟೂರು ಮೇ-13 : ರಿಪೇರಿಗೆಂದು ವಿದ್ಯುತ್ ಕಂಬ ಹತ್ತಿದ್ದ ಲೈನ್‌ಮೆನ್ ಆಕಸ್ಮಿಕ ವಿದ್ಯುಕ್ ಶಾಕ್‌ನಿಂದ ಮೃತಪಟ್ಟ ಘಟನೆ ನಗರದ ಕಂಚಾಘಟ್ಟ ಹೊಸ ಬಡಾವಣೆ ಸಮೀಪ ಸೋಮವಾರ ನಡೆದಿದೆ.ಸೂಗೂರು ಗ್ರಾಮದ ಎಸ್. ಮಂಜುನಾಥ್ (೩೫) ಮೃತ ಲೈನ್‌ಮೆನ್. ರಿಪೇರಿ ಮಾಡಲು ಇವರು ಲೈನ್‌ಕ್ಲಿಯರ್ ಪಡೆದು ಕಂಬ ಹತ್ತಿದ್ದರು. ಆದರೆ ಮತ್ತೊಂದು ಕಡೆಯಿಂದ ಹಾದು ಬಂದಿದ್ದ ಲೈನ್‌ನಿಂದ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಇವರು ತಂತಿ ಮುಟ್ಟುತ್ತಿದ್ದಂತೆ ಶಾಕ್‌ಗೆ ಒಳಗಾದರು. ಕೆಳಗಿದ್ದವರು ಅಸಹಾಯಕರಾಗಿ ನೋಡಬೇಕಾಯಿತು. ರಿಪೇರಿ ಅನುಕೂಲಕ್ಕಿದ್ದ ಅಡ್ಡ ಕಂಬಿ ಮೇಲೆ ಕುಳಿತು ಲೈನ್ ಮುಟ್ಟಿರುವ ಸ್ಥಿತಿಯಲ್ಲೇ ಅವರು ಮೃತಪಟ್ಟಿದ್ದರು. ಮಹಜರು ನಂತರ ಶವ ಇಳಿಸಲಾಯಿತು. ಸಾವಿನ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕುಟುಂಬ ವರ್ಗದವರ ರೋಧನ ಮುಗಿಲು ಮುಟ್ಟಿತ್ತು. ಶಾಸಕ ಕೆ. ಷಡಕ್ಷರಿ, ಮಾಜಿ ಶಾಸಕ ಬಿ.ಸಿ. ನಾಗೇಶ್, ಕೆಜೆಪಿ ಮುಖಂಡ ಲೋಕೇಶ್ವರ ಸ್ಥಳಕ್ಕೆ ಆಗಮಿಸಿ ಸಾಂತ್ವನ ಹೇಳಿದರು. ಎಸ್‌ಇ ಚಂದ್ರಶೇಖರ್ ಆಗಮಿಸಿ ಇಲಾಖೆ ವತಿಯಿಂದ ಪ್ರಕರಣದ ಕುರಿತು ಪರ
ತಿಪಟೂರು: ಸಾಧಾರಣ ಮಳೆ
ತಿಪಟೂರು ಮೇ-12 : ನಗರ ಮತ್ತು ತಾಲ್ಲೂಕಿನ ವಿವಿಧೆಡೆ ಬುಧವಾರ ಸಂಜೆ ಸಾಧಾರಣ ಮಳೆಯಾಗಿದೆ. ಸಂಜೆ ೫.೩೦ರಲ್ಲಿ ನಗರದಲ್ಲಿ ಆರಂಭವಾದ ಮಳೆ ಸುಮಾರು ಮುಕ್ಕಾಲು ಗಂಟೆ ಸುರಿದು ತಂಪೆರೆಯಿತು. ರಾತ್ರಿ ತಾಲ್ಲೂಕಿನ ವಿವಿಧೆಡೆ ಬಿರುಗಾಳಿ ಮತ್ತು ಗುಡುಗಿನಿಂದ ಮಳೆ ಸುರಿಯಿತು. ನಾಗರಘಟ್ಟ ಭಾಗದಲ್ಲಿ ಆಲಿಕಲ್ಲು ಮಳೆ ಸಹಿತ ಭಾರಿ ಮಳೆಯಾಗಿದೆ. ಗಾಳಿಗೆ ಅಲ್ಲಲ್ಲಿ ಮರ, ವಿದ್ಯುತ್ ಕಂಬ ಉರುಳಿವೆ. ವೈ.ಟಿ. ರಸ್ತೆಯ ಕೆಲವೆಡೆ ರಸ್ತೆಗೆ ಅಡ್ಡಲಾಗಿ ಬಿದಿದ್ದ ಕೊಂಬೆಗಳನ್ನು ಬೆಳಗ್ಗೆ ತೆರವುಗೊಳಿಸಿ ಸಂಚಾರಕ್ಕೆ ಸುಗಮಗೊಳಿಸಲಾಯಿತು. ಅಲ್ಲಲ್ಲಿ ಕಂಬಗಳ ಮೇಲೆ ಮರ, ಕೊಂಬೆ ಬಿದ್ದಿದ್ದರಿಂದ ಗ್ರಾಮಾಂತರ ಪ್ರದೇಶಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.ಪ್ರಮಾಣ: ನೊಣವಿನಕೆರೆ-೨೫ ಮಿಮೀ, ತಿಪಟೂರು ೧೬ ಮಿಮೀ, ಹಾಲ್ಕುರಿಕೆ ೧೨ ಮಿಮೀ, ಹೊನ್ನವಳ್ಳಿ-೭ ಮಿಮೀ ಮಳೆಯಾಗಿದೆ. ತಾಲ್ಲೂಕಿನಲ್ಲಿ ಬುಧವಾರ ಸರಾಸರಿ ೧೨.೩ ಮಿಮೀ ಮಳೆ ಬಿದ್ದಿದೆ.ಚಿತ್ರದಲ್ಲಿ : ತಿಪಟೂರು ಎಪಿಎಂಸಿ ಯಾರ್ಡ್‌ನಲ್ಲಿ ಬುಧವಾರ ರಾತ್ರಿ ಮರದ ಕೊಂಬೆಯೊಂದು ಬಿದ್ದು ವಿದ
ಮುಖ್ಯಮಂತ್ರಿ ಗದ್ದುಗೆಯಲ್ಲಿ ಸಿದ್ದರಾಮಯ್ಯ
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ೬೪ರ ಹರೆಯದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದಾಗಿ ರಹಸ್ಯ ಮತದಾನದ ಬಳಿಕ ನಗರಕ್ಕೆ ವೀಕ್ಷಕರಾಗಿ ಆಗಮಿಸಿದ್ದ ವರಿಷ್ಠರ ತಂಡದ ಮುಖ್ಯಸ್ಥ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಪ್ರಕಟಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮಧ್ಯೆ ತೀವ್ರ ಪೈಪೋಟಿ ನಡೆದಿರುವಂತೆಯೇ ಕಾಂಗ್ರೆಸ್ ವರಿಷ್ಠ ನಾಯಕರು ಶುಕ್ರವಾರ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಶಾಸಕರ ಜೊತೆಗೆ ಬೆಳಿಗ್ಗೆಯಿಂದಲೇ ಸಮಾಲೋಚನೆ ಪ್ರಕ್ರಿಯೆ ಆರಂಭಿಸಿದ್ದರು.ಶಾಸಕರ ಅಭಿಪ್ರಾಯ ಸಂಗ್ರಹಕ್ಕಾಗಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯ ಆಯ್ಕೆ ವಿಚಾರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಿಟ್ಟುಬಿಡುವಂತೆ ಮನವಿ ಮಾಡುವ ಒಂದು ವಾಕ್ಯದ ನಿರ್ಣಯ ಮಂಡಿಸಿದರು.ಆದರೆ ವರಿಷ್ಠರು ರಹಸ್ಯ ಮತದಾನದ ಮ
ಮತದಾರರ ಋಣ ತೀರಿಸಲು ಬದ್ಧ : ಕೆ. ಷಡಕ್ಷರಿ
ತಿಪಟೂರು ಮೇ-09: ಎಲ್ಲ ಜಾತಿ, ಧರ್ಮದವರ ಸಹಕಾರದಿಂದ ತಮ್ಮ ಗೆಲುವು ಸಾಧ್ಯವಾಗಿದ್ದು, ಕ್ಷೇತ್ರದ ಮತದಾರರ ಋಣ ತೀರಿಸಲು ಬದ್ಧನಾಗಿದ್ದೇನೆ ಎಂದು ನೂತನ ಶಾಸಕ ಕೆ. ಷಡಕ್ಷರಿ ತಿಳಿಸಿದರು.ಅವರು ಪತ್ರಿಕೆ ಜೊತೆ ಮಾತನಾಡಿ, ಹಿಂದೆ ಅಧಿಕಾರದಲ್ಲಿದ್ದಾಗ ನಾನು ಮಾಡಿದ ಕೆಲಸಗಳು, ಕಾಂಗ್ರೆಸ್ ಪಕ್ಷ ಮತ್ತು ವೈಯಕ್ತಿಕ ವರ್ಚಸ್ಸು ಗೆಲುವು ತಂದು ಕೊಟ್ಟಿದೆ. ಸೋದರ ದಿ. ಕೆ. ರಾಜಶೇಖರ್ ಅವರ ಬಗೆಗಿನ ಜನರ ಅಭಿಮಾನ ಕೂಡ ಗೆಲುವಿಗೆ ಕಾರಣವಾಗಿದೆ. ಇದು ಎಲ್ಲಾ ಜಾತಿ, ಜನಾಂಗಕ್ಕೆ ಸಂದ ಗೆಲುವು. ಎಲ್ಲರನ್ನೂ ಒಟ್ಟಿಗೆ ಪ್ರಗತಿಯುತ್ತ ಕೊಂಡೊಯ್ಯುವ ಮಹದಾಸೆ ಇದೆ. ಶಾಂತಿ, ಸುವ್ಯವಸ್ಥೆಗೆ ಆದ್ಯತೆ ನೀಡುತ್ತೇನೆ. ಕಾರ್ಯಕರ್ತರು ಸಂಯಮದಿಂದ ವರ್ತಿಸುವಂತೆ ನೋಡಿಕೊಳ್ಳುತ್ತೇನೆ. ಕಾಂಗ್ರೆಸ್ ಸಿದ್ಧಾಂತಕ್ಕೆ ಯಾವುದೇ ಧಕ್ಕೆ ತರದಂತೆ ಪ್ರಾಮಾಣಿಕವಾಗಿ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಬಂದಿರುವುದರಿಂದ ಅದನ್ನು ಕ್ಷೇತ್ರದ ಪ್ರಗತಿಗೆ ಬಳಸಿಕೊಳ್ಳುತ್ತೇನೆ. ಹಲವಾರು ಯೋಜನೆಗಳನ್ನು ಸಕಾರಗೊಳಿ
ಕೆ. ಷಡಕ್ಷರಿ ಗೆಲುವಿನ ಹಿನ್ನೆಲೆ : ವಿಜಯೋತ್ಸವ
ತಿಪಟೂರು ಮೇ-09 : ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಷಡಕ್ಷರಿ ಗೆಲುವಿನ ಹಿನ್ನೆಲೆಯಲ್ಲಿ ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರು ಬುಧವಾರ ವಿಜಯೋತ್ಸವ ಆಚರಿಸಿದರು.
ಜನತೆಯ ತೀರ್ಪಿನ ಬಗ್ಗೆ ಗೌರವವಿದೆ : ಬಿ.ಸಿ. ನಾಗೇಶ್ತಿಪಟೂರು : ಅಭಿವೃದ್ಧಿ ಪರವಾಗಿ ಮತ ಚಲಾಯಿಸಿದ ಕ್ಷೇತ್ರದ ಎಲ್ಲ ಮತದಾರರನ್ನು ಅಭಿನಂಧಿಸುತ್ತೇನೆ ಎಂದು ಮಾಜಿ ಶಾಸಕ ಬಿ.ಸಿ. ನಾಗೇಶ್ ತಿಳಿಸಿದರು.ಫಲಿತಾಂಶ ಪ್ರಕಟವಾದ ನಂತರ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಚುನಾವಣೆಯಲ್ಲಿ ತಾಲ್ಲೂಕಿನ ೪೬ ಸಾವಿರ ಮತದಾರು ಅಭಿವೃದ್ಧಿಗೆ ಬೆಂಬಲ ನೀಡಿದ್ದಾರೆ. ಕಳೆದ ಭಾರಿ ಜಯದೊರೆತ ಸಂದರ್ಭದಲ್ಲಿ ಕೂಡ ನನಗೆ ದೊರೆತಿದ್ದು ಇಷ್ಟೆ ಮತ. ರಾಜ್ಯದಲ್ಲಿ ಕಂಡು ಬಂದ ಕಾಂಗ್ರೆಸ್ ಪರ ಅಲೆ, ಕೆ.ಜೆ.ಪಿ. ರೂಪದಲ್ಲಿ ಬಿ.ಜೆ.ಪಿ.ಯ ಮತಗಳು ವಿಭಜನೆ ಆದದ್ದು ಹಾಗೂ ಒಂದಷ್ಟು ಮತಗಳು ಸಮೀಕರಣಗೊಂಡಿದ್ದು, ನನ್ನ ಸೋಲಿಗೆ ಕಾರಣವಾಗಿರಬಹುದು. ಏನೆ ಆದರೂ ಜನತೆಯ ತೀರ್ಪಿನ ಬಗ್ಗೆ ಗೌರವವಿದೆ. ತಾಲ್ಲೂಕಿನಲ್ಲಿ ಮತ್ತೆ ಕೆಟ್ಟ ರಾಜಕೀಯಕ್ಕೆ ಅವಕಾಶವಾಗದಿರಲಿ
ವಿಜಯೋತ್ಸವ ಸಿದ್ಧತೆಗೆ
ತಿಪಟೂರು ಮೇ-08 : ತಾಲ್ಲೂಕಿನಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಮುನ್ನಾ ದಿನವಾದ ಮಂಗಳವಾರ ವಿಜಯೋತ್ಸವ ಸಿದ್ಧತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸದಿಂದ ಕಲಾವಿದ ಶ್ರೀನಿವಾಸ್ ಅವರ ಬಳಿ ಬಾವುಟ ಬರೆಸುತ್ತಿದ್ದರು.
ಅಂಗನವಾಡಿ ಅಕ್ಕಿ ದೋಷ: ದೂರುತಿಪಟೂರು ಮೇ-08 ತಾಲ್ಲೂಕಿನ ಕಟ್ಟೆಹಳ್ಳಿ ಅಂಗನವಾಡಿ ಕೇಂದ್ರದಿಂದ ಮಕ್ಕಳ ಮನೆಗಳಿಗೆ ವಿತರಿಸಿದ್ದ ಅಕ್ಕಿಯಲ್ಲಿ ಯೂರಿಯಾ ರೂಪದ ಸಣ್ಣ ಹರಳು ಅಲ್ಪಪ್ರಮಾಣದಲ್ಲಿ ಕಂಡು ಬಂದಿದ್ದರಿಂದ ಮೇಲಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.ಅಂಗನವಾಡಿ ಕೇಂದ್ರದಿಂದ ಎಂದಿನಂತೆ ಆಯ್ದ ಮನೆಗಳಿಗೆ ತೂಕದ ಲೆಕ್ಕದಲ್ಲಿ ಅಕ್ಕಿ ಕೊಡಲಾಗಿತ್ತು. ಆ ಅಕ್ಕಿಯಲ್ಲಿ ಯೂರಿಯಾದಂಥ ಸಣ್ಣ ಹರಳು ಕಂಡುಬಂದಿದ್ದರಿಂದ ಆತಂಕಗೊಂಡ ಗ್ರಾಮಸ್ಥರು ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸುಜಾತಾ, ಇಲಾಖೆ ಯೋಜನಾಧಿಕಾರಿ ರಂಗನಾಥ್ ಮತ್ತು ಸಿಬ್ಬಂದಿ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡ
ತಿಪಟೂರಿನ ವಿಧಾನ ಸಭೆ ಚುನಾವಣೆ : ಕೆ.ಷಡಕ್ಷರಿ ಗೆಲುವು
ತಿಪಟೂರಿನ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಯವರು 56817 ಮತಗಳನ್ನು ಪಡೆದು ತಮ್ಮ ಸಮೀಪ ಪ್ರತಿಸ್ಪರ್ಧಿ ಬಿ ಜೆ ಪಿಯ ಬಿ.ಸಿ.ನಾಗೇಶ್ (45215) ವಿರುದ್ದ ಗೆಲುವು ಸಾಧಿಸಿದ್ದಾರೆ. ಇತರೆ ಅಭ್ಯರ್ಥಿಗಳು ಪಡೆದ ಮತಗಳ ವಿವರ.....
Karnataka - Tiptur
Result Declared
Candidate
Party
Votes
K.SHADAKSHARI
Indian National Congress
56817
B.C.NAGESH
Bharatiya Janata Party
45215
LOKESHWARA
Karnataka Jantha Paksha
28667
M.LINGARAJU (JAKKANAHALLI)
Janata Dal (Secular)
6104
VEERABHADRAIAH M.C.
Independent
880
ABDULWAKEEL
Bahujan Samaj Party
847
SUDHARSHAN K.G
Badavara Shramikara Raitara Congress Party
504
H.L.MOHANKUMAR
Independent
450
L.P.YADUNANDANA
Independent
415
LINGADAHALLI RAJASHEKARA
Independent
354
ಎಸ್‌ಎಸ್‌ಎಲ್‌ಸಿ: ಶೇ. 78.29 ಫಲಿತಾಂಶ
ತಿಪಟೂರು ಮೇ -08: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲ್ಲೂಕಿಗೆ ಶೇ. ೭೮.೨೯ರಷ್ಟು ಫಲಿತಾಂಶ ಬಂದಿದ್ದು, ಬಾಲಕಿಯರು ಶೇ. ೮೧.೯೬ ಮತ್ತು ಬಾಲಕರು ಶೇ. ೭೫ರಷ್ಟು ತೇರ್ಗಡೆ ಹೊಂದಿದ್ದಾರೆ.ತಿಪಟೂರು ಸ್ಟೆಲ್ಲಾ ಮೇರಿಸ್‌ನ ಸಹನಾ ಮತ್ತು ಅದೇ ಶಾಲೆಯ ಭೂಮಿಕಾ ತಲಾ ಒಟ್ಟು ೬೦೩ ಅಂಕ ಪಡೆದು ತಾಲ್ಲೂಕಿನ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ನಳಂದ ಪ್ರೌಢಶಾಲೆಯ ಟಿ.ಕೆ. ನಯನ ೬೦೧ ಅಂಕ ಪಡೆದು ದ್ವಿತೀಯ, ಸ್ಟೇಲಾಮೇರಿಸ್‌ನ ಜಿ.ಬಿ. ನವೀನ ೫೯೯ ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಗ್ರಾಮಾಂತರ ಮಕ್ಕಳು ಶೇ. ೭೫.೮೧ರಷ್ಟು, ನಗರ ಶಾಲೆಗಳ ಮಕ್ಕಳು ಒಟ್ಟು ಶೇ. ೭೭.೪೮ರಷ್ಟು ಫಲಿತಾಂಶ ಪಡೆದಿದ್ದಾರೆ. ಅನುದಾನಿರಹಿತ ಶಾಲೆಗಳು-ಶೇ. ೮೩.೦೩, ಅನುದಾನಿತ-ಶೇ. ೭೬.೭, ಸರ್ಕಾರಿ-ಶೇ.೭೫.೧೫ರಷ್ಟು ಫಲಿತಾಂಶ ಪಡೆದಿವೆ. ಕೆ.ಬಿ. ಕ್ರಾಸ್‌ನ ರಂಭಾಪುರಿ ಪ್ರೌಢಶಾಲೆ ಮತ್ತು ನಗರದ ಸ್ಟೆಲ್ಲಾ ಮೆರೀಸ್ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ದಾಖಲಿಸಿವೆ. ಮಡೇನೂರು ಹಾಲುಸಿದ್ದೇಶ್ವರ ಪ್ರೌಢಶಾಲೆ-ಶೇ. ೩೬ರಷ್ಟು ಫಲಿತಾಂಶದ ಮೂಲಕ ತಾಲ್ಲೂಕಿನ ಕೊನೆ ಸ್ಥಾನಕ್ಕೆ ಇಳಿದಿ
