Art & Culture

art1

ತಿಪಟೂರು ರಂಗಭೂಮಿ

gubbi-nataka೧೯೨೦-೩೦ರ ದಶಕದಿಂದೀಚೆಗೆ  ಕರ್ನಾಟಕದ ಬಹುಭಾಗಗಳಲ್ಲಿ ಹಲವು ಕಂಪೆನಿ ನಾಟಕಗಳು ಮತ್ತು ಹವ್ಯಾಸಿ ರಂಗತಂಡಗಳು ಹುಟ್ಟಿದವು.ವೀರಣ್ಣನವರ ಗುಬ್ಬಿ ಕಂಪೆನಿ,ಶಿರಹಟ್ಟಿ ಕಂಪೆನಿ ,ಎ.ವಿ.ವರದಾಚಾರರ ರತ್ನಾವಳಿ ಥಿಯೇಟ್ರಿಕ್ ಕಂಪೆನಿ, ದತ್ತಾತ್ರೆಯ ಸಂಗೀತ ನಾಟಕ ಮಂಡಳಿ,ಹಲಗೇರಿ ಮಂಡಳಿಗಳಂತಹ ಹಲವಾರು ಕಂಪೆನಿಗಳು ಹೆಸರುವಾಸಿಯಾಗಿದ್ದವು.ಅಂತಹ ಕೆಲವು ಕಂಪನಿಗಳಿಗೆ ತಿಪಟೂರು ಆಶ್ರಯ ತಾಣವಾಗಿತ್ತು.ಮೂಡಲಪಾಯ ಯಕ್ಷಗಾನ,ನಮ್ಮ ಭಾಗದ ಜನಪದ ರಂಗಭೂಮಿಯ ನಾಟಕಗಳು ಹಾಗು ಈ ಕಂಪನಿ ನಾಟಕಗಳ ಪ್ರಭಾವ ತಿಪಟೂರಿನ ಪರಿಸರದಲ್ಲಿ ಸಹಜವಾಗಿದ್ದರಿಂದ ಹಲವು ರಂಗ ತಂಡಗಳ ಹುಟ್ಟಿಗೆ ಕಾರಣವಾಯಿತು.

Read more...

 

ನಮ್ಮೂರ ಕಲಾವಿದರು

ಹಾಸ್ಯ ಸಾಮ್ರಾಟ ನರಸಿಂಹರಾಜು

narasimharaju1

ನರಸಿಂಹರಾಜುರವರು 24-07-1923ರಲ್ಲಿ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಜನಿಸಿದರು. ತಿಪಟೂರು ಪಟ್ಟಣದಲ್ಲಿ ಪೋಲಿಸ್ ಪೇದೆಯಾಗಿದ್ದ ರಾಮರಾಜು ಹಾಗೂ ವೆಂಕಟಲಕ್ಷ್ಮಮ್ಮ ದಂಪತಿಗಳ ಐವರು ಮಕ್ಕಳಲ್ಲಿ (ಮೂರು ಹೆಣ್ಣು ಹಾಗು ಎರಡು ಗಂಡು) ನರಸಿಂಹರಾಜು ಎಲ್ಲರಿಗಿಂತ ಹಿರಿಯರು, ಬಾಲ್ಯದ ದಿನಗಳನ್ನು ತಿಪಟೂರಿನ ಕೋಟೆಯಲ್ಲಿ ಕಳೆದ ನರಸಿಂಹರಾಜು ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಸಿ.ಬಿ.ಮಲ್ಲಪ್ಪನವರ ಶ್ರೀಚಂದ್ರಮೌಳೀಶ್ವರ ನಾಟಕ ಸಭಾದಲ್ಲಿ ಬಾಲಕಲಾವಿದನಾಗಿ ಸೇರಿಕಕೊಂಡರು. ಅವರಿಗೆ ಅಲ್ಲಿಯೇ ಬದುಕಿನ ಶಿಕ್ಷಣವೂ ಆರಂಭವಾಯಿತು. ಹಾಸ್ಯಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖ, ಶರೀರವನ್ನು ಸಹಜವಾಗಿ ಪಡೆದಿದ್ದ ನರಸಿಂಹರಾಜು ಅವರಿಗೆ ಹಾಸ್ಯಪಾತ್ರಗಳ ನಿರ್ವಹಣೆ ಸಹಜವಾಗಿತ್ತು. ರಂಗಮಂಚದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರು ನಗೆಹೊನಲು ಹರಿಸುತ್ತಿದ್ದರು. ನರಸಿಂಹರಾಜು ಅವರು ಪೌರಾಣಿಕ ಪಾತ್ರಗಳು. ವಿಶ್ವಾಮಿತ್ರ, ರಾಮ ಕೆಲವೊಮ್ಮೆ ರಾವಣ, ಭರತ, ಇನ್ನು ಕೆಲವು ಸಲ ಲಕ್ಷ್ಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಆಗಲೆ ಜನಪ್ರಿಯತೆ ಪಡೆದಿದ್ದ ಬೇಡರ ಕಣ್ಣಪ್ಪ ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರದಲ್ಲಿ ನರಸಿಂಹರಾಜು ತುಂಬ ಜನಪ್ರಿಯತೆ ಪಡೆದರು.ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ, ಎಡತೊರೆಯ ಕಂಪೆನಿ, ಹಿರಿಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತಾ ಕಲಾ ಸಂಘ, ಬೇಲೂರಿನ  ಗುಂಡಾ ಜೋಯಿಸರ ಕಂಪೆನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪೆನಿಯ ನಾಟಕಗಳಲ್ಲಿ ತಮ್ಮ ಬಣ್ನದ ಬದುಕಿನ ಆರಂಭದ ೨೭ ವರ್ಷಗಳನ್ನು ನರಸಿಂಹಾರಾಜು ಕಳೆದಿದ್ದರು. ರಾಜ್‌ಕುಮಾರ್ ಅವರೊಂದಿಗೆ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ಅವರು ನಂತರವೂ ರಂಗಭೂಮಿಯನ್ನು ಕಡೆಗಳಿಸಲಿಲ್ಲ.ಬಾಲನಟನಾಗಿ ರಂಗ ಪ್ರವೇಶಿಸಿದ ನರಸಿಂಹರಾಜು ಬೆಳೆಯುತ್ತಿದ್ದಂತೆ ದೊಡ್ಡವರ ಪಾತ್ರಗಳಿಗೆ ಬಡ್ತಿ ಪಡೆದರು. ತಮ್ಮ ವಿಶಿಷ್ಟ ಅಭಿನಯದಿಂದ ಹಾಸ್ಯನಟರಾಗಿ ರೂಪುಗೊಂಡರು. ರಂಭೂಮಿಯಲ್ಲಿ ಪಡೆದ ಎಲ್ಲ ಬಗೆಯ ಅನುಭವ ಅವರಿಗೆ ಸಿನಿಮಾ ಜಗತ್ತಿನಲ್ಲಿ ಉಪಯೋಗಕ್ಕೆ ಬಂದಿತು. ಚಿತ್ರರಂಗ ಪ್ರವೇಶಕ್ಕೆ ನಿಮಿತ್ತವಾದ ಬೇಡರ ಕಣ್ಣಪ್ಪದಲ್ಲಿನ ಕಾಶಿಯ ಪಾತ್ರ ಅವರಿಗೆ ಲೀಲಾಜಾಲವಾಗಿತ್ತು. ಬೇಡರ ಕಣ್ಣಪ್ಪ ನಾಟಕದಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರದರ್ಶನಗಳಲ್ಲಿ ಅವರು ಕಾಶಿಯ ಪಾತ್ರ ವಹಿಸಿದ್ದರು. 

Read more...

 

ಕವಿಗಳು

ಎನ್.ಕೆ.ಹನುಮಂತಯ್ಯ

N-K-Hanumanthaiah

ಎನ್‌ಕೆ ಬಹಳ ವಿಶಿಷ್ಟವಾದ ದಲಿತ ಸಂವೇದನೆಯ ಲೇಖಕ. ದೇವನೂರ ಮಹಾದೇವ, ಸಿದ್ದಲಿಂಗಯ್ಯ ಅಥವಾ ಮೊಗಳ್ಳಿ, ಜಾಹ್ನವಿ ಅವರ ನಂತರ ಬಂದ ದಲಿತರ ಲೇಖಕರಲ್ಲಿ ಎನ್.ಕೆ. ಹನುಮಂತಯ್ಯ ಬಹಳ ಮುಖ್ಯವಾದವರು. ದಲಿತ ಸಾಹಿತ್ಯದ ನಾಲ್ಕನೆಯ ಈ ತಲೆಮಾರು ಲೋಕವನ್ನು ಗ್ರಹಿಸುತ್ತಿರುವ ಮತ್ತು ಬರೆಹದಲ್ಲಿ ಕಂಡರಿಸುತ್ತಿರುವ ಪರಿ ತೀರಾ ವಿಭಿನ್ನವಾಗಿದೆ. ಇದು ದಲಿತ ಸಾಹಿತ್ಯ ಪರಂಪರೆಯ ಶಕ್ತಧಾರೆಯನ್ನು ಮುಂದುವರೆಸುತ್ತಿದೆ, ಮಾತ್ರವಲ್ಲ ಅದಕ್ಕೆ ಹೊಸಮೊಗಗಳನ್ನು ಜೋಡಿಸುತ್ತಿದೆ. ಆದರೂ ‘ದಲಿತ ಸಂವೇದನೆ' ಎಂಬ ಚೌಕಟ್ಟಿನಲ್ಲಿ ಎನ್‌ಕೆ ಅವರ ಬರೆಹವನ್ನು ಹಿಡಿಯುವುದಕ್ಕೆ ಆಗುವುದಿಲ್ಲ. ಅದು ದಲಿತ ಸಂವೇದನೆಯನ್ನು ವಿಶ್ವಪ್ರಜ್ಞೆಯ ವಿಶಾಲ ಭಿತ್ತಿಯಲ್ಲಿಟ್ಟು ನೋಡುವ ಅಥವಾ ಹೊಸ ಸಮಾಜನಿರ್ಮಾಣದ ಕಾಳಜಿಗಳನ್ನೂ ದಲಿತಭಿತ್ತಿಯಲ್ಲಿ ಅಳವಡಿಸುವ ಕಾಯಕದಲ್ಲಿ ತೊಡಗಿಕೊಂಡಿದೆ.

Read more...