Famous personalities

ಸಿಂಗ್ರಿ ಮನೆತನದ ಹಿರಿಮೆ...

singri-doddananjappaತಿಪಟೂರು ನಗರಕ್ಕೆ ಒಂದಿಷ್ಟು ಕಾಣಿಕೆ ನೀಡಿದ ಮನೆತನಗಳಲ್ಲಿ ಸಿಂಗ್ರಿ ಮನೆತನವೂ ಒಂದು. ಸಾಮಾಜಿಕ ಹಾಗೂ ಧಾರ್ಮಿಕ ಕಾಣಿಕೆಯನ್ನು ನೀಡಿದ ಹೆಗ್ಗಳಿಕೆ ಈ ಕುಟುಂಬದ ಪರವಾಗಿದೆ. ವಿಶ್ರಾಂತಿ ಮಂಟಪ, ಉದ್ಯಾನವನ, ಗೋಕಟ್ಟೆ, ದೇವಾಲಯ, ಜೀರ್ಣೋದ್ದಾರ ಕಾರ್ಯ, ಉದ್ಯಮ ಮುಂತಾದ ಸೇವಾಕಾರ್ಯ ಮಾಡಿದ ಕೀರ್ತಿ ಸಿಂಗ್ರಿಯವರ ಮನೆತನಕ್ಕೆ ಸಲ್ಲುತ್ತದೆ.

ಸಿಂಗ್ರಿಮನೆತನದವರು ತಿಪಟೂರಿನ ಮೂಲನಿವಾಸಿಗಳಲ್ಲ. ಅವರು ಆಂದ್ರಪ್ರದೇಶದಿಂದ ಕರ್ನಾಟಕಕ್ಕೆ ವಲಸೆ ಬಂದವರು. ಅವರು ಚಿತ್ತೂರು ಜಿಲ್ಲೆಯ ಪುಂಗನೂರು ತಾಲ್ಲೂಕಿನ ಸಿಂಗರಿಗುಂಟ ಗ್ರಾಮದ ಮೂಲ ನಿವಾಸಿಗಳು. ಈ ಮನೆತನದ ಕೀರ್ತಿಶೇಷ ಸಿಂರಿಲಿಂಗಣ್ಣ ಅವರು ಬರ ವುತ್ತು ಬಡತನದ ಬೇಗೆಗೆ ಸಿಲುಕಿ ಅತೀವ ಕಷ್ಟನಷ್ಟಗಳನ್ನು ಅನುಭವಿಸಿದರು. ಆಗ ಗುಳೇ ಹೋಗಲು ನಿರ್ಧಾರ ಮಾಡಿದರು. ದೈವಭಕ್ತರಾದ ಸಿಂಗ್ರಿಲಿಂಗಣ್ಣನವರು ತಮ್ಮ ಮನೆದೇವರಿಗೆ ಹರಕೆಕಟ್ಟಿ ತಮ್ಮ ಭಾವಮೈದುನರಾಗಿದ್ದ ಮಾನ್ಯ ಸಿದ್ದವಟಂ ರಾಮಣ್ಣನವರೊಂದಿಗೆ ಕೊಡಿ ವಲಸೆ ಹೊರಟರು. ಮೈಸೂರು ಸಂಸ್ಥಾನದ ಬಂಗಾರಪೇಟೆಗೆ ತಮ್ಮ ಕುಟುಂಬದೊಂದಿಗೆ ಬಂದು ನೆಲಸಿದರು.

Read more...

 

Sri Pallagatti Adavappa

Pallagatti-Adavappa-2Selflessness, generosity, honesty, friendliness and fortitude are the words that are associated with his exemplary character. A ready helping hand, a ready innocent smile; a good wish in the heart, a friendly part on the back that, essentially, was Pallagatti Adavappa. No ill-will, no dissembling, no hypocrisy. He had the largeness of heart and nobility of mind. He had great wealth, but he had the great wealth of heart. His social conspicuity was not because of the wealth he had, but because of the wealth he gave. He gave freely for the betterment of society. His social sympathy was of a practical nature, his chief desire being to leave society better than what he found it.

Read more...

 

ಟಿ. ಎಸ್. ಕರಿಬಸಯ್ಯನವರು

karibasaviah3ಶ್ರೀ ಕಂಠೀರವ ಸ್ಟುಡಿಯೋ ಎಂಬ ಭವ್ಯ ಸಂಸ್ಥೆಯನ್ನು ಕಟ್ಟಿ ಕಲಾಕಂಠೀರವ ಎಂಬ ಬಿರುದಿಗೆ ಭಾಜನರಾದ ಕರಿಬಸಯ್ಯನವರ ಜೀವನೇತಿಹಾಸದ ತಲಕಾವೇರಿಯ ಉಗಮ ೧೯೧೨ ನೆಯ ಸಂವತ್ಸರದಲ್ಲಿ ತುಮಕೂರು ಜಿಲ್ಲೆಯ ಕಲ್ಪತರು ಕ್ಷೇತ್ರವಾದ ತಿಪಟೂರಿನಲ್ಲಾಗುತ್ತದೆ. ಅವರು ವಾಸ್ತವವಾಗಿ ಹುಟ್ಟಿದ್ದು ಸಿದ್ಧಗಂಗಾಕ್ಷೇತ್ರದ ತಪ್ಪಲಿನ ಬಾಣಸವಾಡಿಯಲ್ಲಿ. ಮಾತಾಮಹನ ಮನೆಯಲ್ಲಿ. ಕಬ್ಬಿಣದ ವ್ಯಾಪಾರಿ ಬಸವಣ್ಣನವರ ಮಗ ಸಿದ್ಧಬಸಪ್ಪನವರ ಏಕಮಾತ್ರ ಪುತ್ರ ಕರಿಬಸಯ್ಯ. ಅವರ ತಾಯಿ ಲಾಯರ್ ನಂಬುಂಡಪ್ಪನವರ ಮಗಳು ಚಿಕ್ಕಬಸಮ್ಮ. ಲಾಯರೆಂದರೆ ಎಲ್. ಎಲ್. ಬಿ. ಪಾಸು ಮಾಡಿದ ಕಾನೂನು ಪಂಡಿತರಲ್ಲ. ವ್ಯವಹಾರಾನುಭವ ವಿವೇಕಗಳಿಂದ ಪರಿಣತರಾಗಿ, ವಾಕ್ಕೌಶಲ್ಯವನ್ನು ಗಳಿಸಿದ್ದವರಾದ್ದರಿಂದ ಜನ ಅವರನ್ನು ಲಾಯರೆಂದೇ ಕರೆಯುತ್ತಾರೆ.

Read more...

 

ಟಿ.ಜಿ. ತಿಮ್ಮೇಗೌಡರು

          ಟಿ.ಜಿ. ತಿಮ್ಮೇಗೌಡರು ಈ ತಾಲ್ಲೂಕಿನ ಮೊದಲಶಾಸಕರಾಗಿ ಆಯ್ಕೆಯಾಗಿದ್ದರು. ಅದಕ್ಕಿಂತ ಮೊದಲು ಟಿ.ಜಿ. ತಿಮ್ಮೇಗೌಡರು Thimmegowda_T_Gಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿಯಾಗಿ ವಿಜೇತರಾದ ಇವರು ಸೋಷಿಯಲಿಸ್ಟ್ ಪಾರ್ಟಿ, ಪ್ರಜಾಪಾರ್ಟಿ, ಪಕ್ಷೇತರರ ವಿರುದ್ಧ ನೇರ ಚುನಾವಣೆಯಲ್ಲಿ ಜಯ ಗಳಿಸಿದ್ದರು. ಇವರು ಶಾಸಕರಾಗಿದ್ದಾಗ ಜನ ಸ್ವತಂತ್ರ ಪಡೆದ ಹುರುಪಿನಲ್ಲಿದ್ದರು. ಅಕ್ಕಿ ಬೆಲ್ಲಕ್ಕೆ ಜನಗಳಿಗೆ ಬಾರಿ ಭಂಗ. ರಂಗೂನು, ಕೊಯಿಮತ್ತೂರಿನಿಂದ ರೈಲಿನ ವ್ಯಾಗನ್‌ಗಳಲ್ಲಿ ತಿಪಟೂರಿಗೆ ಅಕ್ಕಿ ಬರುತ್ತಿತ್ತು. ಜನ ಹಾಸನದ ಆಲೂರಿನಿಂದಲೂ ಅಕ್ಕಿ ತರುತ್ತಿದ್ದರು. ಹೋಟೆಲ್‌ಗಳಲ್ಲಿ ಅಕ್ಕಿ ಇಡ್ಲಿ, ದೋಸೆ ಮಾಡುವಂತಿರಲಿಲ್ಲ. ಅದು ಕಾನೂನಿನ ಪ್ರಕಾರ ಆಗ ಅಪರಾಧ. ಅಕ್ಕಿ ಇಡ್ಲಿ ಮತ್ತು ದೋಸೆಯನ್ನು ಹೆಸರುಕಾಳು  ಇಡ್ಲಿ ಎಂದು ಕದ್ದು ಮಾರುತ್ತಿದ್ದರು. ಅಕ್ಕಿಗೆ ಅಷ್ಟು ಭಂಗವಿದ್ದ ಕಾಲ ಅದು. ಜನ ಮದುವೆ ಮಾಡಿ ಊಟಕ್ಕೆ ಕರೆದರೆ ನಿಯಮ ಪಾಲಿಸಬೇಕಿತ್ತು. send your ration in advance ಎಂದು ಲಗ್ನ ಪತ್ರಿಕೆಯ ಮೇಲೆ ಮುದ್ರಿಸಬೇಕಾಗಿತ್ತು. ಯುಗಾದಿ ಹಬ್ಬ ಬಂದರೆ ಜನ ಶಾಸಕರನ್ನು ಹುಡುಕಿ ಬರುತ್ತಿದ್ದರು. ಮಾರುಕಟ್ಟೆಯಲ್ಲಿ ಅಕ್ಕಿ ಬೆಲ್ಲ ಸಿಕ್ಕುತ್ತಿಲ್ಲ. ಸರ್ಕಾರದ ಜೊತೆ ಮಾತನಾಡಿ ಎಂದು.ಅಂತಹ ಅಸಂದರ್ಭಗಳಲ್ಲಿ ಟಿ.ಜಿ. ತಿಮ್ಮೇಗೌಡರ ಜನಪರವಾದ ಪ್ರಯತ್ನಗಳು ಕೆಲಸಮಾಡಿವೆ. ಇವರ ಕಾಲದಲ್ಲಿ ತಿಪಟೂರು-ತಿಮ್ಲಾಪುರ ಮಾರ್ಗ ರಸ್ತೆ, ನೊಣವಿನಕೆರೆ ಅಮಾನಿಕೆರೆಯ ಅಗಲೀಕರಣ,ತಿಪಟೂರಿಗೆ ಖಒಅ ಬರಲು ಆಗ ರೈತರ ಪರಾವಾಗಿ ನಿಂತು  ಮಾಡಿದ ಕೆಲಸ ಮುಂತಾದ ನಾಗರೀಕ ಸೇವಾ ಕಾರ್ಯಗಳು ಇವರಿಂದ ಆಗಿವೆ.

 
<< Start < Prev 1 2 Next > End >>

Page 1 of 2