• Home
  • Classifieds
  • Jobs
  • Matrimonial
  • Gallery
  • About Us
  • Support
  • Contact Us
Categories
  • Tiptur History
  • Historical Places
  • Art & Culture
  • Sports
  • Famous Personalities
  • Taluk Admin
  • Govt. Offices
  • Education & Institution
  • Business Directory
  • Industries
  • Hotels & Lodges
  • Route Map
  • Tours & Travels
Yellow pages
yellow-page
Follow Us On
 video
facebook orkut
twitter blog
News & Events
1 2 3 4 5

photo 20/05/2012..ರ ಇನ್ ಪೋ ವರದಿ.
ನಗರದ ಹಳೇಪಾಳ್ಯ ಬಡಾವಣೆ: ಆಕಸ್ಮಿಕ ಬೆಂಕಿ ಅವಘಡ ನಗರದ ಹಳೇಪಾಳ್ಯ ಬಡಾವಣೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಸುಮಾರು ೬ ಮನೆಗಳು ಜಕಂಗೊಂಡಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ನೇಕಾರರು ಹಾಗೂ ಕೂಲಿ ಕಾರ್ಮಿಕರು ಹಚ್ಚಾಗಿರುವ ಈ ಬಡಾವಣೆಯಲ್ಲಿ ಮನೆಗಳು ಒತ್ತಟ್ಟಿಗಿದ್ದು ಇಂದಿನ ಬೆಂಕಿ ಆಕಸ್ಮಿಕದಲ್ಲಿ ಚನ್ನಮ್ಮ, ಶ್ರೀನಿವಾಸ ಹಾಗೂ ಗುರುಮೂರ್ತಿ ಅವರುಗಳ ಮನೆಗಳಲ್ಲಿ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದ್ದು ಉಳಿದ ಮೂರು ಮನೆಗಳಲ್ಲಿ ಬೆಂಕಿ ಕಾಣಿಸಿ ಕೊಂಡಿದೆ ಆದರೂ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿಲ್ಲ. ಚೆನ್ನಮ್ಮ ಎಂಬುವರ ಮನೆಗೆ ಬೆಳಗ್ಗೆ ೯.೩೦ರಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ನಂತರ ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಿ ಅವಘಡ ಸಂಭವಿಸಿದೆ. ಚೆನ್ನಮ್ಮನವರ ಮನೆಯ ಎಲ್ಲಾ ಬಟ್ಟೆ, ರೇಷ್ಮೆ ಸೀರೆ, ದವಸ ಮತ್ತು ಗೃಹೋಪಯೋಗಿ ವಸ್ತುಗಳ ಭಸ್ಮವಾಗಿ ಅಂದಾಜು ೭೦ ಸಾವಿರ ರೂ. ನಷ್ಟ ಉಂಟಾಗಿದೆ. ಪಕ್ಕದ ಗುರುಮೂರ್ತಿ ಎಂಬುವರ ಮನೆಯ ಪವರ್ ಲೂಂ, ನೇಯ್ಗೆ ಹಂತದಲ್ಲಿದ್ದ ಮತ್ತು ಮಾರಾಟಕ್ಕೆ ಸ

photo 19/05/2012..ರ ಇನ್ ಪೋ ವರದಿ.
ನಗರಸಭೆಯ ವಿಶೇಷ ಸಾಮಾನ್ಯ ಸಭೆ ನಗರಸಭೆ ಪ್ರಭಾರ ಅಧ್ಯಕ್ಷ ಟಿ.ಎನ್. ಪ್ರಕಾಶ್ ತಾವು ಅಧಿಕಾರ ವಹಿಸಿಕೊಂಡ ನಂತರದ ಕೇವಲ ೨೮ ದಿನಗಳಲ್ಲಿ ೫ ಸಭೆಗಳನ್ನು ನಡೆಸಿ ನಗರಸಭೆ ಇತಿಹಾಸದಲ್ಲಿಯೆ ಹೊಸ ದಾಖಲೆಗೆ ಮುನ್ನುಡಿ ಬರೆದರು. ಪ್ರಭಾರ ಅಧ್ಯಕ್ಷ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ೫ನೇ ಸಭೆಯಲ್ಲಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಟ್ಟು ೨೭೬ ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿ ಕೈಗೊಳ್ಳುವ ಕ್ರಿಯಾಯೋಜನೆಗೆ ಸಭೆಯ ಸರ್ವಾನುಮತದ ಅನುಮೋದನೆ ದೊರೆಯಿತು. ನಗರಸಭೆ ಪ್ರಭಾರಿ ಅಧ್ಯಕ್ಷ ಟಿ.ಎನ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೌರಾಯುಕ್ತ ಡಾ.ವೆಂಕಟೇಶಯ್ಯ ವಿವಿಧ ಅನುದಾನ ಲಭ್ಯತೆ ಆಧಾರದ ಉದ್ದೇಶಿತ ಕಾಮಗಾರಿ, ಕಾರ್ಯಕ್ರಮ ವಿವರ ನೀಡಿದರು. ಎಲ್ಲ ಸದಸ್ಯರು ಅನುಮೋದನೆ ನೀಡಿದರು. ಉಳಿದ ಬಾಕಿ ಅವಧಿಯಲ್ಲಿ ಸದಸ್ಯರು ನಗರದ ಅಭಿವೃದ್ಧಿಗೆ ಶ್ರಮಿಸಬೇಕಾದ ತುರ್ತಿದೆ ಎಂದ ಸ್ಥಾಯಿ ಸಮಿತಿ ಅಧ್ಯಕ್ಷ ಬಾಗೆಪಲ್ಲಿ ನಟರಾಜು, ಹಣದ ಸದ್ಬಳಕೆಗೆ ಕೋರಿದರು. ಸದಸ್ಯೆ ವಿಶಾಲಮ್ಮ ಮಾತನಾಡಿ, ಕಾಮಗಾರಿ ಟ

photo 18/05/2012..ರ ಇನ್ ಪೋ ವರದಿ.
ಪ್ರತಿಭಟನೆ: ತಾಲೂಕು ಕಛೇರಿಗೆ ಬೀಗ ರಾಜ್ಯ ಸರ್ಕಾರದ ಆಡಳಿತ ವೈಪಲ್ಯದ ಬಗ್ಗೆ ಜನಜಾಗೃತಿ ಉಂಟು ಮಾಡುವ ಹಿನ್ನೆಲೆಯಲ್ಲಿ ಪಕ್ಷದ ಆದೇಶದಂತೆ ತಾಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ಕೆ. ಷಡಕ್ಷರಿಯವರ ನೇತೃತ್ವದಲ್ಲಿ ತಾಲೂಕು ಕಛೇರಿಗೆ  ತಾಸು ಕಾಲ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ನಗರದ ತಹಶೀಲ್ದಾರ್ ಕಛೇರಿ ಬಳಿ ಗುರುವಾರ ಬೆಳಗ್ಗೆ ಸುಮಾರು ೧೧ರ ಸಮಯದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು, ಕಛೇರಿಯ ಪ್ರವೇಶ ದ್ವಾರವನ್ನು ಅಡ್ಡಗಟ್ಟಿ ನಿಂತು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಮೊಳಗಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ. ಷಡಕ್ಷರಿ, ಮುಖ್ಯ ಮಂತ್ರಿ ಬದಲಾದರು ಸರ್ಕಾರದ ಆಡಳಿತದಲ್ಲಿ ಯಾವ ಬದಲಾವಣೆಯೂ ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ಭ್ರಷ್ಟಾಚಾರ ವಿಸ್ತಾರಗೊಳ್ಳುತ್ತಲೇ ಇದ್ದು, ಅಧಿಕಾರಿಗಳು ಸರ್ಕಾರದ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲ ಬಡ ಜನರ ಸಮಸ್ಯೆ ಕೇಳುವವರು ದಿಕ್ಕಿಲ್ಲ. ಸರ್ಕಾರಿ ಕಛೇರಿಗಳಲ್ಲಿ ಸಹ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಭ್ರಷ್

photo 17/05/2012..ರ ಇನ್ ಪೋ ವರದಿ.
ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ ಸಮಾರಂಭ ಹಾಸ್ಟೆಲ್‌ನಲ್ಲಿ ಜೀವನ ವಿದ್ಯಾರ್ಥಿಗಳ ಪಾಲಿಗೆ ಒಂದು ಮಧುರ ಅನುಭವ ಎಂದು ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ರುದ್ರಮುನಿಸ್ವಾಮಿ ಅಭಿಪ್ರಾಯಪಟ್ಟರು. ಅವರು ನಗರದ ಕಲ್ಪತರು ತಾಂತ್ರಿಕ ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಭಾಷಿಕರ ವಡನಾಟ, ಆಚಾರ, ವಿಚಾರ, ಸಂಸ್ಕೃತಿ ಸೇರಿದಂತೆ ಅನೇಕ ಅನುಭವಗಳು ಲಭ್ಯವಾಗುವುದಲ್ಲದೆ ಸ್ನೇಹ ಜೀವಿಗಳಾಗಲು ಹಾಗೂ ಒಳ್ಳೆಯ ನಾಗರೀಕರಾಗಿ ರೂಪಗೊಳ್ಳು ಹಾಸ್ಟೆಲ್ ಒಂದು ಉತ್ತಮ ತಾಣವೂ ಹೌದು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಂ. ಶಶಿಧರ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆ ರೂಡಿಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ಸಂಸ್ಥೆಯ ಮತ್ತೋರ್ವ ಕಾರ್ಯದರ್ಶಿ ಜಿ.ಕೆ. ಶಿವಸ್ವಾಮಿ ಕಾರ್ಯ

photo 15/05/2012..ರ ಇನ್ ಪೋ ವರದಿ.
ತಿಪಟೂರಿನಲ್ಲಿ ತಕ್ಷಣ : ನ್ಯಾಫೆಡ್ ಕೇಂದ್ರ ತರೆಯುವ ಬಗ್ಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಅವೈಜ್ಞಾನಿಕವಾಗಿ ಕೊಬ್ಬರಿ ಧಾರಣೆ ಕುಸಿದಿರುವುದರಿಂದ ತಕ್ಷಣ ಎಪಿಎಂಸಿ ಆವರಣದಲ್ಲಿ ಕೇಂದ್ರದ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವ ನಾಫೆಡ್ ಕೇಂದ್ರ ತೆರೆದು ಆತಂಕಗೊಂಡ ರೈತರ ಸಹಾಯಕ್ಕೆ ಬರಬೇಕೆಂದು ಶಾಸಕ ಬಿ.ಸಿ. ನಾಗೇಶ್ ಒತ್ತಾಯಿಸಿದರು. ನಗರದಲ್ಲಿ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಚೆಗೆ ಕೊಬ್ಬರಿ ಬೆಲೆ ನಿಯಂತ್ರಣಕ್ಕೆ ಬಂದಿದ್ದಲ್ಲದೇ ಅಲ್ಪ ಪ್ರಮಾಣದಲ್ಲಿ ಏರಿಳಿತ ಕಾಣುತ್ತಿತ್ತು. ಕಳೆದ ವರ್ಷ ಉತ್ತಮವಾಗಿದ್ದ ಕೊಬ್ಬರಿ ಬೆಲೆ ಈಚೆಗೆ ತೀರಾ ಕುಸಿದು ರೈತ ಬಾಂಧವರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗ ಕ್ವಿಂಟಾಲ್‌ಗೆ ಸುಮಾರು ೮೦೦ರಿಂದ ೯೦೦ ರೂ. ಕಡಿಮೆ ಧಾರಣೆ ಇದೆ. ಸಧ್ಯ ಮಾರುಕಟ್ಟೆ ಹರಾಜು ಧಾರಣೆ ಸುಮಾರು ೫೩೦೦ ರೂ. ಇದ್ದು, ಕೇಂದ್ರ ಸರಕಾರ ಘೋಷಿಸಿರುವ ೫೩೫೦ ರೂ. ಬೆಂಬಲ ಬೆಲೆಗಿಂತ ಕೆಳಕ್ಕೀಳಿದಿದೆ. ಮುಂದೆ ಇದಕ್ಕಿಂತ ದರ ಕಡಿಮೆಯಾಗುವ ಲಕ್ಷಣ ಕಂಡು ಬರುತ್ತಿದ್ದು, ಸಂಕಟ ಕಾಲದಲ್ಲಿ  

photo 12/05/2012..ರ ಇನ್ ಪೋ ವರದಿ.
ಅಪರಾಧ ಮುಕ್ತ ಸಮಾಜ ಸಮೃದ್ಧ ತಿಪಟೂರು: ಅವರವರು ನಂಬಿರುವ ದೇವರು ದ್ವೇಷ, ಅಸೂಯೆ, ಕ್ರೌರ್ಯ, ಪಕ್ಷಪಾತ, ಸಣ್ಣತನ ಹಾಗೂ ಪರಧನ ವಿರೋಧಿ ಎನ್ನುವುದಾದರೆ ಸಮಾಜದಲ್ಲಿ ಅಪರಾಧಗಳಿಗೆ ಆಸ್ಪದ ಇರಬೇಕಿಲ್ಲ ಎಂದು ಪೌರಾಯುಕ್ತ ಡಾ. ವೆಂಕಟೇಶಯ್ಯ ತಿಳಿಸಿದರು. ನಗರದ ಉಪ ಬಂಧಿಖಾನೆಯಲ್ಲಿ ಸ್ನೇಹಜ್ಯೋತಿ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವಿಚಾರಣಾಧೀನ ಬಂಧಿಗಳ ಮನಃಪರಿವರ್ತನೆಗೆ ಗುರುವಾರ ಸಂಜೆ ಏರ್ಪಡಿಸಿದ್ದ ನೀತಿ ಸಂದೇಶದ ಕಿರುಚಿತ್ರಗಳ ಪ್ರದರ್ಶನ ಸಂದರ್ಭದಲ್ಲಿ ಅವರು ಮಾತನಾಡಿ, ಅಪರಾಧಗಳು ಸಮಾಜದ ನೆಮ್ಮದಿಯನ್ನಷ್ಟೇ ಕೆಡಿಸದೆ ಇಡೀ ವ್ಯವಸ್ಥೆಗೆ ಆರ್ಥಿಕ ಮತ್ತು ಸಮಯದ ಹೊರೆಯಾಗಿವೆ. ವಿವೇಕವಿಲ್ಲದ ಆವೇಶ ಮತ್ತು ದುರಾಲೋಚನೆಗೆ ಬಿದ್ದ ಗಳಿಗೆ ಅಪರಾಧಿಗಳನ್ನಾಗಿ ಮಾಡುತ್ತದೆ. ಕಾನೂನು ಕ್ರಮಕ್ಕೆ ಒಳಪಟ್ಟ ನಂತರ ಪಶ್ವಾತ್ತಾಪ ಪಡುವ ಜನ ಹೆಚ್ಚು. ಒಂದು ಕ್ಷಣದ ತಪ್ಪು ಆಯಸ್ಸಿನ ಬಹುಭಾಗವನ್ನು ನುಂಗಬಹುದು. ವಿಚಾರಣಾಧೀನ ಬಂಧಿಗಳಲ್ಲಿ ಹಲವರಿಗೆ ಪರಿವರ್ತನೆ ಅವಕಾಶ ಇರುತ್ತದೆ. ಜೈಲನ್ನು ಮನಸ್ಸು ಮಾಗಿಸುವ ಆತ್ಮವಿಶ್ಲೇಷ

photo 10/05/2012..ರ ಇನ್ ಪೋ ವರದಿ.
ಕೊನೆಹಳ್ಳಿ : ಗ್ರಾಮೀಣ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರ ಗ್ರಾಮೀಣ ಪ್ರದೇಶದ ಮಕ್ಳಳಲ್ಲಿ ಹುದುಗಿರುವ ಸುಪ್ತವಾದ ಪ್ರತಿಭೆಯನ್ನು ಹೊರತೆಗೆದು ಪೋಷಿಸುವ ಕೆಲಸ ಪರಿಣಾಮಕಾರಿಯಾಗಬೇಕು. ಇದರಿಂದ ಭವಿಷ್ಯದಲ್ಲಿ ಅವರು ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡುವ ಸಾಮಾರ್ಥ್ಯಗಳಿಸುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆನಂದರವಿ ಅಭಿಪ್ರಾಯ ಪಟ್ಟರು. ತಾಲ್ಲೂಕಿನ ಕೊನೇಹಳ್ಳಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಬಾಲ ಭವನ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ತಿಪಟೂರಿನ ಭೂಮಿ ರಂಗ ಪ್ರಯೋಗ ಶಾಲೆ, ಕೊನೆಹಳ್ಳಿಯ ಮೂಡಲಪಾಯ ಯಕ್ಷಗಾನ ಕೇಂದ್ರದ ಸಹಯೋಗದಲ್ಲಿ ಗ್ರಾಮೀಣ ಮಕ್ಕಳಿಗೆ ೧೫ ದಿನ ಹಮ್ಮಿಕೊಂಡಿರುವ ವಿಶೇಷ ಬೇಸಿಗೆ ಶಿಬಿರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ವಿಜ್ಞಾನ, ಆಧುನಿಕ ತಂತ್ರಜ್ಞಾನ ಮತ್ತು ಮಾಹಿತಿ ಯುಗದಲ್ಲಿ ನಡೆಯುತ್ತಿರುವ ಪೈಪೋಟಿಗೆ ಗ್ರಾಮೀಣ ಪ್ರತಿಭೆಗಳು ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿರುವ ಸಂದರ್ಭಗಳು ಹೆ

09/05/2012..ರ ಇನ್ ಪೋ ವರದಿ.
ಆಯವ್ಯಯ ಮಂಡನೆ  ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ಪ್ರಭಾರ ಅಧ್ಯಕ್ಷ ಟಿ.ಎನ್.ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ೨೦೧೨-೧೩ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ೪೯೨ ಲಕ್ಷ ರೂಗಳ ಉಳಿತಾಯ ಬಜೆಟ್ ಮಂಡಿಸಲಾಯಿತು. ಪೌರಾಯುಕ್ತ ಡಾ.ವೆಂಕಟೇಶಯ್ಯ ಕರೆದಿದ್ದ ಬಜೆಟ್ ಅಧಿವೇಶನದಲ್ಲಿ ನಗರಾಭಿವೃದ್ದಿ ಮತ್ತು ಸೌಂದರ್ಯಕ್ಕೆ ಹೆಚ್ಚಿನ ಆಧ್ಯತೆ ನೀಡುವ ಜೊತೆಗೆ ಉಳಿತಾಯ ಬಜೆಟ್ ಮಂಡಿಸಿದ್ದು ಸದಸ್ಯರ ಸಂತಸಕ್ಕೆ ಕಾರಣವಾಗಿತ್ತು. ತಿಪಟೂರಿನ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ಬಜೆಟ್ ಮಂಡಿಸುವ ಅವಕಾಶ ದೊರೆತ ಪ್ರಭಾರ ಅಧ್ಯಕ್ಷ ಮುಂದಿನ ಆಯವ್ಯದಲ್ಲಿ ಒಟ್ಟು ೪೨.೪೭ಕೋಟಿ ಆದಾಯ ನಿರೀಕ್ಷಿಸಿದ್ದು, ೩೨.೯೪ ಕೋಟಿ ಖರ್ಚಿನ ನಂತರ ೪.೯೨ ಲಕ್ಷ ಉಳಿತಾಯ ಬಜೆಟ್ ಎಂದು ಘೋಷಿಸಿದಾಗ ಸಭೆ ಕರತಾಡನ ಮಾಡುವ ಮೂಲಕ ಸ್ವಾಗತಿಸಿತು.ಆರಂಭಿಕ ಶಿಲ್ಕು: ೯.೫೨,೬೮೮೯೯. ಲಕ್ಷ ರೂಗಳು. ೨೦೧೨-೧೩ನೇ ಸಾಲಿಗೆ ನಿರೀಕ್ಷಿತ ಆದಾಯ: ೩೨,೯೪,೩೮೩೦೦ಲಕ್ಷ ರೂಗಳು. ಒಟ್ಟು:  ೪೨,೪೭,೦೭೧೯೯ಲಕ್ಷಗಳು. ೨೦೧೨-೧೩ನೇ ಸಾಲಿಗೆ ನಿರೀಕ್ಷಿತ ಖರ್ಚು: ೪೨,೪೨,೧೫೦೦೦ರೂ

photo 08/05/2012..ರ ಇನ್ ಪೋ ವರದಿ.
ಶರಣಧರ್ಮ ಚಿಂತನ ಗೋಷ್ಠಿ ಮಾನವರಲ್ಲಿರುವ ನಾನು ಎಂಬ ಅಹಂ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ ಎಂದು ಇಲ್ಲಿನ ಶ್ರೀ ವೀರಶೈವ ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯ ಪಟ್ಟರು. ನಗರದಲ್ಲಿನ ಆಶ್ರಮದ ಆವರಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ೧೮೬ನೇ ಬೆಳದಿಂಗಳ ಶರಣಧರ್ಮ ಚಿಂತನ ಗೋಷ್ಠಿ ಹಾಗೂ ಬಸವೇಶ್ವರ ಜಯಂತಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಗಳು ಎನಗಿಂತ ಕಿರಿಯವರಿಲ್ಲ ಎಂಬ ವಿನಯವಂತಿಕೆಯೊಂದಿಗೆ ೧೨ನೇ ಶತಮಾನದ ಬಿಗುವಿನ ಸನ್ನಿವೇಶದಲ್ಲಿಯೆ ಜಾತೀಯತೆಯ ವಿರುದ್ಧ ಧ್ವನಿ ಎತ್ತಿದ ಬಸವಣ್ಣ ಸಮಾಜಿಕ ಚಿಂತರಲ್ಲಿ ಸರ್ವಶ್ರೇಷ್ಠರು ಎಂದು ತಿಳಿಸಿದರು. ಬಸವಣ್ಣ ಅಂದು ಜಾತಿಯತೆ ವಿರುದ್ಧ ಧ್ವನಿ ಎತ್ತದೆ ಹೋಗಿದ್ದಲ್ಲಿ ಈ ವೇಳೆ ಜಾತಿಯ ಕರಿನೆರಳಲ್ಲಿ  ಜಗತ್ತು ಸರ್ವ ನಾಶವಾಗುವ ಸಾಧ್ಯತೆ ಇತ್ತು ಎಂದ ಅವರು, ಸಮಾನತೆ ಸರ್ವ ಜನಾಂಗದ ಹಿತ ಚಿಂತನೆಯ ದೃಷ್ಠಿಯಿಂದ ಸ್ಥಾಪಿತವಾದ ಧರ್ಮದಲ್ಲಿ ಕೂಡ ಇಂದು ವ್ಯಾಪಾರಿ ಚಿಂತನೆಗಳು ನ

photo 07/05/2012..ರ ಇನ್ ಪೋ ವರದಿ.
ಬೇಸಿಗೆ ಶಿಬಿರದಲ್ಲಿ ಸಿದ್ಧಪಡಿಸಿದ ‘ನೀಲಿ ಕುದುರೆ’ ನಾಟಕ ಭೂಮಿ ರಂಗ ಪ್ರಯೋಗ ಶಾಲೆಯಿಂದ ನಡೆದ ಬೇಸಿಗೆ ಶಿಬಿರದಲ್ಲಿ ಸಿದ್ಧಪಡಿಸಿದ ‘ನೀಲಿ ಕುದುರೆ’ ನಾಟಕವನ್ನು ಮಕ್ಕಳು ಈಚೆಗೆ ಪ್ರದರ್ಶಿಸಿದರು. ತಾಪಂ ಸಾಮಾನ್ಯ ಸಭೆ ೭ಕ್ಕೆ ತಿಪಟೂರು: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೇ ೭ರಂದು ಬೆಳಿಗ್ಗೆ ೧೧ಕ್ಕೆ ತಾ.ಪಂ. ಅಧ್ಯಕ್ಷೆ ಪುಷ್ಪಾವತಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಲಿದೆ. ಸ್ವಾಗತ: ನಗರದ ಪ್ರವಾಸಿ ಮಂದಿರ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿಟ್ಟು ಅವರ ಪುತ್ಥಳಿ ಸ್ಥಾಪಿಸಲು ನಗರಸಭೆ ನಿರ್ಣಯ ಕೈಗೊಂಡಿರುವುದನ್ನು ದಲಿತ ಸಂಘರ್ಷ ಸಮಿತಿ ಸ್ವಾಗತಿಸಿದೆ. ದಸಂಸ ಕಾರ್ಯಕರ್ತರ ಬಹುದಿನಗಳ ಬೇಡಿಕೆ ಈಡೇರಿಸುವ ಸಂಬಂಧ ಕೈಗೊಂಡ ಈ ನಿರ್ಣಯ ಅಭಿನಂದನೀಯ. ನಿರ್ಣಯ ಆದಷ್ಟೂ ಶೀಘ್ರ ಕಾರ್ಯರೂಪಕ್ಕೆ ಬರಲಿ ಎಂದು ಸಮಿತಿ ತಾಲ್ಲೂಕು ಅಧ್ಯಕ್ಷ ನಾಗತಿಹಳ್ಳಿ ಕೃಷ್ಣಮೂರ್ತಿ ಆಶಿಸಿದ್ದಾರೆ.   ಪರಿಸರ ಹಾಗೂ ಆರೋಗ್ಯ ವಿಭಾಗ: ಹೋಟಲ್ ಮತ್ತು ಬೇಕರಿಗಳ ಮೇಲೆ ದಾಳಿ ಅವಧಿ ಮೀರಿದ ತಂಪುಪಾನಿಯಾ ಮಾರಾಟ ಮಾಡುತ್ತ

photo 05/05/2012..ರ ಇನ್ ಪೋ ವರದಿ.
ಕಾರ್ಮಿಕ ದಿನಾಚರಣೆ ಸಾರ್ವಜನಿಕ ವಾಹನ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಾಹನ ಚಾಲಕರು ಜವಬ್ದಾರಿ ಅರಿತು ಎಚ್ಚರಿಕೆಯಿಂದ ವಾಹನ ಚಲಾಯಿಸಿದರೆ ರಸ್ತೆಯಲ್ಲಿ ನಡೆಯುವ ಅವಘಡ ತಪ್ಪಿಸಿ ಅಪಾರ ಸಾವು ನೋವು ನಷ್ಟವನ್ನು ತಪ್ಪಿಸಬಹುದು ಎಂದು ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಅಭಿಪ್ರಾಯ ಪಟ್ಟರು.ನಗರದ ಕೆ.ಎಸ್.ಆರ್.ಟಿ.ಸಿ ಡಿಪೋ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಕಾನೂನು ಅನುವು ಮಾಡಿ ಕೊಟ್ಟಿದೆ. ಆದರೆ ಕಾನೂನು ಮೀರಿ ನಡೆದಾಗ ನಾನಾ ಸಮಸ್ಯೆಗಳು ಉದ್ಭವಿಸಿ, ಮಾನಸಿಕವಾಗಿ ನೆಮ್ಮದಿ ಕಳೆದು ಕೊಳ್ಳಬೇಕಾಗುತ್ತದೆ. ಸಾರ್ವಜನಿಕ ವಾಹನ ಚಲಾಯಿಸುವ ಚಾಲಕರನ್ನು ಅವ

photo 01/05/2012..ರ ಇನ್ ಪೋ ವರದಿ.
ಹಳ್ಳಿ ಅನ್ನ ಐಶ್ವರ್ಯ ಮೆಲುಕು: ಬೀರಿದ ಘಮಲು ತಿಪಟೂರು: ಒಂದೆಡೆ ಮಕ್ಕಳ ಅಪೌಷ್ಟಿಕತೆ ವಿಚಾರ ಕಳವಳ ಹುಟ್ಟಿಸಿದ್ದರೆ ಮತ್ತೊಂದೆಡೆ ಪೌಷ್ಟಿಕ ಆಹಾರ ಪೂರೈಕೆ ಗುತ್ತಿಗೆ ಅವ್ಯವಹಾರ ಅನಾಗರಿಕ ರೌದ್ರವಕ್ಕೆ ಸಾಕ್ಷಿಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಹಳೆ ರುಚಿ ಹಳ್ಳಿ ಅನ್ನದ ಪುಷ್ಟಿ ಐಶ್ವರ್ಯದ ಬಗ್ಗೆ ‘ಮೆಲುಕು’ ಹಾಕುವ ಪ್ರಯತ್ನ ನೊಣವಿನಕೆರೆಯಲ್ಲಿ ನಡೆದಿದೆ. ಅಲ್ಲಿದ್ದ ೮೫ಕ್ಕೂ ಹೆಚ್ಚು ಮಹಿಳೆಯರ ಮಡಿಲಲ್ಲಿ ಅಜ್ಜಿ ಕಾಲದ ತರವೇಹೇವಾರಿ ತಿಂಡಿ, ತಿನಿಸು ಮೆಲ್ಲಗೆ ಘಮಲು ಎಬ್ಬಿಸಿದ್ದರೆ ಕಾತರದಲ್ಲಿ ಕುಳಿತವರ ಬಾಯಲ್ಲಿ ಅರಿವಿಲ್ಲದೆ ಜೊಲ್ಲು ಸುರಿದಿತ್ತು. ಬಾಲ್ಯದಲ್ಲಿ ಕಂಡುಂಡ ತಿನಿಸನ್ನು ಮತ್ತೆ ಕಾಣುವ, ರುಚಿ ನೋಡುವ ಆಸೆ ಪುಟಿಯುತ್ತಿತ್ತು. ಅಂದ ಹಾಗೆ ಆ ಕಾರ್ಯಕ್ರಮದ ಹೆಸರೇ ‘ಹಳ್ಳಿ ಅನ್ನ’! ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಪರಿಸರ ಪ್ರೇಮಿ ಗುಂಗುರಮಳೆ ಮುರಳೀಧರ್ ತಾಲ್ಲೂಕಿನ ನೊಣವಿನಕೆರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಈ ಕಾರ್ಯಕ್ರಮ ಹಳೆ ಹಳ್ಳಿ ಅನ್ನದ ರುಚಿಯ ಜತೆಗ

photo 28/04/2012..ರ ಇನ್ ಪೋ ವರದಿ.
ಬರ ಪರಿಸ್ಥಿತಿ: ಬಿಜೆಪಿ ಮುಖಂಡರ ತಂಡ ಅಧ್ಯಯನ ನಡೆಸಿತು ಬಿಜೆಪಿ ಮುಖಂಡರ ತಂಡ ಶುಕ್ರವಾರ ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿ ಜನರ ದೂರು ಆಲಿಸಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭೈರಪ್ಪ ಹಾಗೂ ತಾಲ್ಲೂಕು ಅಧ್ಯಕ್ಷ ಶಿವಸ್ವಾಮಿ ನೇತೃತ್ವದ ತಂಡ ಬಂಡೇಗೇಟ್‌ನಿಂದ ಪ್ರವಾಸ ಆರಂಭಿಸಿತು. ಬೆನ್ನಾಯಕನಹಳ್ಳಿ, ಬಂಡೇಗೇಟ್, ದೊಡ್ಡಮಾರ್ಪನಳ್ಳಿ ವ್ಯಾಪ್ತಿ ಪ್ರತಿ ಬೇಸಿಗೆಯಲ್ಲಿ ನೀರಿಗೆ ಕೊರತೆ ಕಾಡುವುದರಿಂದ ಮತ್ತು ಫ್ಲೋರೈಡ್ ಸಮಸ್ಯೆ ಇರುವುದರಿಂದ ಶಾಶ್ವತ ನೀರಾವರಿ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಕೋರಿದರು. ಸಾರ್ಥವಳ್ಳಿಯಲ್ಲೂ ಕುಡಿವ ಸಮಸ್ಯೆ ಕೇಳಿಬಂತು. ಹೆಚ್ಚುವರಿ ಕೊಳವೆ ಬಾವಿ ಕೊರೆಸಿ, ೧೦ ಹೆಚ್‌ಪಿ ಪಂಪ್ ಅಳವಡಿಸಿ, ಪ್ರತ್ಯೇತ ಟಿಸಿ ಅಳವಡಿಸಬೇಕೆಂದು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಮತ್ತು ಗ್ರಾಮಸ್ಥರು ಕೋರಿದರು. ಹೊನ್ನವಳ್ಳಿ ನಂತರ ಎಸ್. ಲಕ್ಕಿಹಳ್ಳಿಗೆ ತೆರಳಿದ ತಂಡಕ್ಕೆ ಕುಡಿವ ನೀರಿನ ಗಂಭೀರ ಪರಿಸ್ಥಿತಿ ಗಮನಕ್ಕೆ ಬಂತು. ಈ ವ್ಯಾಪ್ತಿಯ ದೀಘ್ರ ಕಾಲದ ಸಮಸ್ಯೆ ಪರಿಹರಿಸಲು

photo 27/04/2012..ರ ಇನ್ ಪೋ ವರದಿ.
ಪರಿಶಿಷ್ಟರ ಕಲ್ಯಾಣ ನಿಧಿಯಿಂದ:  ಸೋಲಾರ್ ಲಾಟೀನು ವಿತರಣೆ ತಿಪಟೂರು ತಾಲ್ಲೂಕು ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟರ ಕಲ್ಯಾಣ ನಿಧಿಯಿಂದ ಈಚೆಗೆ ಸೋಲಾರ್ ಲಾಟೀನು ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಅಕ್ಕಮಹದೇವಿ, ಉಪಾಧ್ಯಕ್ಷ ಉಮೇಶ್, ಸದಸ್ಯ ಮಲ್ಲೇಶ್, ಪಿಡಿಒ ಮಮತಾ ಇದ್ದರು. ಬಸವ ಜಯಂತಿ:  ಕಾರ್ಯಕ್ರಮ ಸಮಾಜದಲ್ಲಿ ಅವ್ಯಾಹತವಾಗಿದ್ದ ಅಸಮಾನತೆ ಮತ್ತು ಜಾತಿಯತೆಯನ್ನು ತೊಳೆದು ಹಾಕಲು ಬಸವಣ್ಣನವರು ಮಾಡಿದ ಕ್ರಾಂತಿಯಿಂದ ಅವರನ್ನು ಸಮಾಜಿಕ ಹರಿಕಾರ ಎಂದು ಕರೆಯುತ್ತೇವೆ ಅವರ ಆದರ್ಶ ಪಾಲಿಸಿದಲ್ಲಿ ಜಯಂತಿ ಆಚರಣೆಯೂ ಸಾರ್ಥಕತೆ ಕಾಣುತ್ತದೆ ಎಂದು ಉಪವಿಭಾಗಾಧಿಕಾರಿ ಶಿಲ್ಪಾ ಅಭಿಪ್ರಾಯ ಪಟ್ಟರು. ಇಲ್ಲಿನ ತಾಲೂಕು ಕಛೇರಿಯಲ್ಲಿ ತಾಲೂಕು ಆಡಳಿತ ಮತ್ತು ನಾನಾ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಘಾಟಿಸಿ ಅವರು ಮಾತನಾಡಿದರು. ವೈಚಾರಿಕ ಚಿಂತನೆಗಳೊಂದಿಗೆ ರೂಪಗೊಂಡಿರುವ ಬಸವ ತತ್ವಗಳು ಎಂದಿಗೂ ಪ್ರಸ್ತ

photo 25/04/2012..ರ ಇನ್ ಪೋ ವರದಿ.
ಬಸವ ಜಯಂತಿ ಕಾರ್ಯಕ್ರಮ ಸಮಾಜದಲ್ಲಿ ಅವ್ಯಾಹತವಾಗಿದ್ದ ಅಸಮಾನತೆ ಮತ್ತು ಜಾತಿಯತೆಯನ್ನು ತೊಳೆದು ಹಾಕಲು ಬಸವಣ್ಣನವರು ಮಾಡಿದ ಕ್ರಾಂತಿಯಿಂದ ಅವರನ್ನು ಸಮಾಜಿಕ ಹರಿಕಾರ ಎಂದು ಕರೆಯುತ್ತೇವೆ ಅವರ ಆದರ್ಶ ಪಾಲಿಸಿದಲ್ಲಿ ಜಯಂತಿ ಆಚರಣೆಯೂ ಸಾರ್ಥಕತೆ ಕಾಣುತ್ತದೆ ಎಂದು ಉಪವಿಭಾಗಾಧಿಕಾರಿ ಶಿಲ್ಪಾ ಅಭಿಪ್ರಾಯ ಪಟ್ಟರು. ಇಲ್ಲಿನ ತಾಲೂಕು ಕಛೇರಿಯಲ್ಲಿ ತಾಲೂಕು ಆಡಳಿತ ಮತ್ತು ನಾನಾ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಘಾಟಿಸಿ ಅವರು ಮಾತನಾಡಿದರು. ವೈಚಾರಿಕ ಚಿಂತನೆಗಳೊಂದಿಗೆ ರೂಪಗೊಂಡಿರುವ ಬಸವ ತತ್ವಗಳು ಎಂದಿಗೂ ಪ್ರಸ್ತುತ ಎನಿಸಿವೆ. ಬಸವೇಶ್ವರರ ನೀತಿಯೊಂದಿಗಿನ ಕಾಯಕ ನಿಷ್ಠೆ ತತ್ವ ಸಮಾಜ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಬಿ.ಸಿ.ನಾಗೇಶ್ ಮಾತನಾಡಿ ಜಾತಿ ಹೆಸರಿನಲ್ಲಿ ಛಿದ್ರವಾಗುತ್ತಿರುವ ಸಮಜ ಒಗ್ಗೂಡಲು ಬಸವಣ್ಣನವರ ತತ್ವಾದರ್ಶಗಳ ಅನುಸರಣೆ ಅಗತ್ಯವ

Sponsors

Search
Helplines
  • Emergency Services
  • Hospitals
  • Blood Bank
  • Train Timings
  • APMC Market
  • Banks & Co-op Society
  • Clubs & Association
  • Useful Links
  • Phone Directory
Sponsors

Properties

real-estate

Home | Contact Us | FAQ's | Terms & Conditions Copyright © 2010 Localsnest. All Rights Reserved.